ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕ್ರಿಕೆಟ್ ದೇವರು ಸಚಿನ್ ದಾಖಲೆ ಪುಡಿಗಟ್ಟಿದ ಕ್ರಿಕೆಟ್ ಕಿಂಗ್ ವಿರಾಟ್!
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್ ಗಳ ಸುಲಭ ಜಯ ಗಳಿಸಿದೆ. ಈ ಮೂಲಕ ಈ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಭಾರತ ಶುಭಾರಂಭ ಮಾಡಿದೆ. ಇದೇ ಪಂದ್ಯದಲ್ಲಿ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, 49.3 ಓವರ್ ಗಳಲ್ಲಿ 199 ರನ್ ಬಾರಿಸಿ ಆಲ್ ಔಟ್ ಆಗಿತ್ತು. ಗುರಿ ಬೆನ್ನಟ್ಟಿದ ಭಾರತದ ಟಾಪ್ ಆರ್ಡರ್ ನ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶಾನ್ ಮತ್ತು ಶ್ರೇಯಸ್ ಅಯ್ಯರ್ ಡಕೌಟ್ ಆಗಿದ್ದರಿಂದ ಭಾರತ ಆರಂಭಿಕ ಆಘಾತಕ್ಕೀಡಾಗಿತ್ತು. ಆದ್ರೆ, ವಿಕೆಟ್ ಕಾವಲು ನಿಂತ ವಿರಾಟ್ ಕೊಹ್ಲಿ 85 ರನ್ ಸೇರಿಸಿದ್ರೆ, ಕನ್ನಡಿಗ ಕೆಎಲ್ ರಾಹುಲ್ 97 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದ್ರು.
ಪಂದ್ಯದಲ್ಲಿ ರನ್ ಮಷೀನ್ ವಿರಾಟ್ ಕೊಹ್ಲಿ 85 ರನ್ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಬದಿಗೆ ಸರಿಸಿದ್ದಾರೆ. ಅದೇನಂದ್ರೆ, ಐಸಿಸಿ ಸೀಮಿತ ಓವರ್ ಗಳ ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಭಾರತೀಯರ ದಾಖಲೆ ಪಟ್ಟಿಯಲ್ಲಿ ಸಚಿನ್ ಮೊದಲ ಸ್ಥಾನ ಪಡೆದುಕೊಂಡಿದ್ರು. 58 ಇನ್ನಿಂಗ್ಸ್ ಗಳಲ್ಲಿ 2719 ರನ್ ಬಾರಿಸುವ ಮೂಲಕ ಸಚಿನ್ ಈ ಸಾಧನೆ ಮಾಡಿದ್ರು. ಆದ್ರೆ, ಸದ್ಯ 64 ಇನ್ನಿಂಗ್ಸ್ ಗಳಲ್ಲಿ 2785 ರನ್ ಗಳಿಸುವ ಮೂಲಕ ಕೊಹ್ಲಿ, ಸಚಿನ್ ಸಾಧನೆಯನ್ನು ಮೀರಿಸಿದಂತಾಗಿದೆ.
ಅಂತಾರಾಷ್ಟ್ರೀಯ ಟೆಸ್ಟ್ ನಲ್ಲಿ 29, ಏಕದಿನದಲ್ಲಿ 47 ಮತ್ತು ಟಿ20ಯಲ್ಲಿ 1 ಶತಕ ಸೇರಿ ಕೊಹ್ಲಿ ಒಟ್ಟಾರೆ 77 ಶತಕಗಳನ್ನು ಬಾರಿಸಿದ್ದಾರೆ. ಇನ್ನು 23 ಶತಕಗಳನ್ನು ಸಿಡಿಸಿದ್ರೆ ಕೊಹ್ಲಿ, ಸಚಿನ್ ಹೆಸರಿನಲ್ಲಿರುವ ಶತಕದ ಶತಕ ವಿಶ್ವದಾಖಲೆ ಸರಿದೂಗಿಸಲಿದ್ದಾರೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ